ಸಾರ್ವಜನಿಕ ಗ್ರಂಥಾಲಯಗಳ ಅಂತ್ಯ !

Sridhar, M. S. ಸಾರ್ವಜನಿಕ ಗ್ರಂಥಾಲಯಗಳ ಅಂತ್ಯ !, 2004 [Newspaper/magazine article]

[img]
Preview
PDF
K8_END_OF_PUBLIC_LIBRARIES_FOR_ELIS.pdf

Download (103kB) | Preview

English abstract

Tim Coates reported that public libraries would be unsought/ useless by year 2020 since despite increase in annual expenditure of these libraries, user-visits and borrowing have declined. Television and Internet are identified as the reasons for such a change. But the public libraries are also used more for the purpose of listening to music CD’s, chatting with friends on the net, etc. Findings of the report lead to a lot of discussions and debate. An examination of Karnataka’s public libraries plight in this background revealed that inadequate collection, membership and facilities with only 15% of the literate population taking the public library membership and majority of them visiting library to read only news papers reflects the under-usage and failure of public libraries to reach public at large. In this state of affair, it is meaningless for public libraries to talk about computerization, digitization, etc. Inappropriate collection even in digital form will be unacceptable to users. The bulk purchase policy of public libraries, entangled in confusions and allegations, is the main culprit. Majority of publishers are competing to publish books keeping bulk purchase by government in view. Book selection should be decentralized so that good books are selected even without submitting prescribed applications and required books can also be purchased from the local retailers. The use statistics of a small British library in Bangalore, in spite of paid membership, should be an eye opener if we compare with that of public libraries. A scientific analysis of the collection, services, membership, use of public libraries in Karnataka is required.

Kannada abstract

ಗ್ರಂಥಾಲಯಗಳ ವಾರ್ಷಿಕ ವೆಚ್ಚ ಕಳೆದೊಂದು ವರ್ಷದಲ್ಲಿ ಗಣನೀಯವಾಗಿ ಹೆಚ್ಚಿದ್ದರೂ, ಓದುಗರ ಭೇಟಿ ಮತ್ತು ಪುಸ್ತಕಗಳ ಎರವಲು ಇಳಿಮುಖವಾಗಿರುವುದನ್ನು ದಾಖಲಿಸಿ ೨೦೨೦ರ ವೇಳೆಗೆ ಸಾರ್ವಜನಿಕ ಗ್ರಂಥಾಲಯಗಳು ಅನುಪಯುಕ್ತ/ ಅನಪೇಕ್ಷಿತವಾಗಲಿವೆ ಎಂಬ ಟಿಮ್ ಕೋಟೆಸ್ನ ವರದಿ ಗಮನಾರ್ಹ. ಹೀಗೆ ಇಳಿಮುಖಗೊಂಡ ಗ್ರಂಥಾಲಯ ಬಳಕೆಗೆ ಟಿವಿ, ಇಂಟರ್ನೆಟ್ ಮತ್ತಿತರ ಡಿಜಿಟಲ್ ಮಾಧ್ಯಮಗಳ ದಾಳಿಯನ್ನು ಕಾರಣವನ್ನಾಗಿಸಿದರೂ, ಗ್ರಂಥಾಲಯಗಳಲ್ಲಿ ಸಂಗೀತದ ಸಿ ಡಿ, ಅಂತರ್ಜಾಲ ಹಾಗೂ ಸ್ನೇಹಿತರೊಂದಿಗೆ ಚ್ಯಾಟ್ ಮಾಡುವುದು ಹೆಚ್ಚಿರುವುದರಿಂದ ಕೆಲವು ತುರ್ತು ಪರಿಹಾರಗಳನ್ನು ಸೂಚಿಸಿರುವ ಟಿಮ್ನ ವರದಿಯಿಂದ ಬೆರಗುಗೊಂಡ ಬ್ರಿಟೀಷರು ಸಾಕಷ್ಟು ಚರ್ಚೆ, ವಿವಾದಗಳನ್ನು ಹುಟ್ಟುಹಾಕಿದರು. ಕೆಲವರು ಈ ವರದಿಯನ್ನೇ ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳ ಸ್ಥಿತಿಯನ್ನು ಗಮನಿಸಿದರೆ ಸದಸ್ಯತ್ವ, ಸಂಗ್ರಹ, ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅಕ್ಷರಸ್ಥ ಜನಸಂಖ್ಯೆಯ ಶೇ ೧೫ ರಷ್ಟು ಮಂದಿ ಮಾತ್ರ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುತ್ತಿದ್ದು, ಅವರಲ್ಲಿಯೂ ಹೆಚ್ಚಿನವರು ದಿನಪತ್ರಿಕೆ ಓದಲು ಹೋಗುತ್ತಾರೆ ಎಂಬುದು ಸಾರ್ವಜನಿಕ ಗ್ರಂಥಾಲಯಗಳ ಬಳಕೆ, ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ಇಂತಹ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಕಂಪ್ಯೂಟರೀಕರಣ, ಡಿಜಿಟಲ್ ಗ್ರಂಥಾಲಯಗಳ ಬಗೆಗಿನ ಚರ್ಚೆ ಬಾಲಿಶವೆನಿಸುತ್ತದೆ. ಅಸಮರ್ಪಕ ಗ್ರಂಥಸಂಗ್ರಹಣೆ ಯಾವ ರೂಪದಲ್ಲಿಯೂ ಅಸ್ವೀಕೃತವಾಗಿಯೇ ಉಳಿಯುತ್ತದೆ. ಸರ್ಕಾರದ ಸಗಟು ಖರೀದಿಯೇ ಇದಕ್ಕೆ ಹೊಣೆಯಾಗಿದ್ದು ಇದು ಅನೇಕ ಗೊಂದಲ, ಚರ್ಚೆ, ಆರೋಪಗಳಿಗೆ ಸಿಕ್ಕಿ ಸಾರ್ವಜನಿಕ ಗ್ರಂಥಾಲಯಗಳ ಸೇವೆ ನಲುಗುತ್ತಿದೆ. ಸಬ್ಸಿಡಿ ರೂಪದ ಸಗಟು ಖರೀದಿಗಾಗಿ ಪ್ರಕಾಶಕರು ಪುಸ್ತಕ ಪ್ರಕಟಿಸುವ ಪೈಪೋಟಿಗಿಳಿದಿದ್ದಾರೆ. ಸಾರ್ವಜನಿಕ ಗ್ರಂಥಾಲಯಗಳು ಅಲ್ಪ ಪ್ರಮಾಣದ ಸದಸ್ಯತ್ವ, ಸೀಮಿತ ಗ್ರಾಹಕ ಬಳಕೆಯಿಂದ ಹೊರಬರುವಂತಾಗಬೇಕು. ಇದಕ್ಕಾಗಿ ಪುಸ್ತಕ ಆಯ್ಕೆಯನ್ನು ವಿಕೇಂದ್ರೀಕರಣಗೊಳಿಸಿ, ಸ್ಥಳೀಯ ಮಾರಾಟಗಾರರಿಂದಲೂ ಪುಸ್ತಕ ಖರೀದಿಸಿ, ಅರ್ಜಿ ಇಲ್ಲದೆಯೂ ಪುಸ್ತಕಗಳ ಆಯ್ಕೆ ನಡೆಯುವಂತಾಗಬೇಕು ಮತ್ತು ಸೇವಾ ಗುಣಮಟ್ಟ ಹೆಚ್ಚಿಸಬೇಕು. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಬ್ರಿಟೀಷ್ ಗ್ರಂಥಾಲಯದ ಪುಟ್ಟ ಶಾಖೆ, ಶುಲ್ಕ ವಿಧಿಸಿಯೂ ಪಡೆದಿರುವ ಸದಸ್ಯತ್ವ ಹಾಗೂ ಬಳಕೆಯ ಅಂಕಿ ಅಂಶಗಳು ಕಣ್ಣು ತೆರೆಸುವಂತಿವೆ. ಇದರೊಂದಿಗೆ ಸಾರ್ವಜನಿಕ ಗ್ರಂಥಾಲಯಗಳ ಸಂಗ್ರಹ, ಸೇವೆ, ಸದಸ್ಯತ್ವ, ಬಳಕೆಯ ಅಂಕಿ ಅಂಶಗಳ ವ್ಶೆಜ್ಞಾನಿಕ ಮೌಲ್ಯಮಾಪನ ನಡೆದು ಸಮಸ್ಯೆಯ ಮೂಲವನ್ನು ಅರಿತು ಪರಿಹಾರೋಪಾಯಗಳನ್ನು ರೂಪಿಸಬೇಕಿದೆ.

Item type: Newspaper/magazine article
Keywords: ಸಾರ್ವಜನಿಕ ಗ್ರಂಥಾಲಯಗಳು, ಗ್ರಂಥಸಂಗ್ರಹಣೆ, ಗ್ರಂಥಾಲಯ ಸದಸ್ಯತ್ವ, ಗ್ರಂಥಾಲಯ ಬಳಕೆ, ಸಗಟು ಖರೀದಿ, ಪುಸ್ತಕ ಆಯ್ಕೆ, public libraries, library collection, library membership, library usage, bulk Purchase of books, book selection
Subjects: D. Libraries as physical collections. > DC. Public libraries.
Depositing user: Dr. M S Sridhar
Date deposited: 06 Mar 2008
Last modified: 02 Oct 2014 12:10
URI: http://hdl.handle.net/10760/11186

Downloads

Downloads per month over past year

Actions (login required)

View Item View Item