ಮರೀಚಿಕೆಯಾದ ಕನ್ನಡ ಪುಸ್ತಕಗಳ ಸಮಗ್ರ ಸೂಚಿ ಮತ್ತು ಸಂಗ್ರಹ

Sridhar, M. S. . ಮರೀಚಿಕೆಯಾದ ಕನ್ನಡ ಪುಸ್ತಕಗಳ ಸಮಗ್ರ ಸೂಚಿ ಮತ್ತು ಸಂಗ್ರಹ., 2008 In: UNSPECIFIED, (ed.) Prof. K. S. Deshpande Festschrift Volume. UNSPECIFIED. (Unpublished) [Book chapter]

[img]
Preview
PDF
SAMAGRA_GRANTHA_SUCHI_MATHTU_SANGRAHA.pdf

Download (170kB) | Preview

English abstract

A comprehensive catalogue of over a lakh Kannada books, published so far and current catalogue of about 1500 titles published every year have been elusive dream for researchers and common readers. Among the efforts put so far the comprehensive catalogue of over 40,000 books published in 70s by University of Mysore under the leadership of Prof. K. S. Deshpande is the only effort towards developing a comprehensive catalogue. Efforts like that of "Grantha Sampada" of Karnataka Ganaka Parishath and that of INFLINBET are too inadequate and not user-friendly. Without a comprehensive catalogue of Kannada Books, talking about e-books, digital libraries, etc. are meaningless. Users neither seek after scanned copyright-free books nor they are true e-books. State public libraries, Kannada Book Authority and Kannada Book industry have failed to make efforts to at least add details of Kannada books to ‘World Cat’ of OCLC and ISBN database. Surprisingly, it is libraries abroad like LC and British Library (UK) provide bibliographical details of over 15000 Kannada books on Internet. Kannada readers and scholars have been left high and dry without a comprehensive catalogue and a comprehensive reference library of all published Kannada books.

Kannada abstract

ಈ ಹಿಂದೆ ಪ್ರಕಟವಾಗಿರುವ ಕನ್ನಡ ಪುಸ್ತಕಗಳ ಪೂರ್ವಾನ್ವಿತ ಸೂಚಿಯೂ ಇಲ್ಲದೆ, ಪ್ರತೀ ವರ್ಷ ಪ್ರಕಟವಾಗುವ ಕನ್ನಡ ಪುಸ್ತಕಗಳ ಸಮಗ್ರ ಅವಲೋಕನವೂ ಇಲ್ಲದೆ ಆಸಕ್ತರಿಗೆ ಕನ್ನಡ ಭಾಷೆಯಲ್ಲಿ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಯಾವುದೇ ಮಾಹಿತಿ ದೊರೆಯುತ್ತಿಲ್ಲದ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯ ಸಮಗ್ರ ಗ್ರಂಥಸೂಚಿಯ ಕೊರತೆ ಎದ್ದು ತೋರುತ್ತದೆ. ಈ ನಿಟ್ಟಿನಲ್ಲಿ ಈ ಹಿಂದೆ ಪ್ರೊ. ಕೆ ಎಸ್ ದೇಶಪಾಂಡೆಯವರ ನೇತೃತ್ವದಲ್ಲಿ ಮೈಸೂರು ವಿ ವಿ ಪ್ರಕಟಿಸಿರುವ ಕನ್ನಡ ಗ್ರಂಥಸೂಚಿ ಒಂದು ದಿಟ್ಟ ಪ್ರಯತ್ನ, ಆದರೆ ಈ ಯೋಜನೆ ಸೂಕ್ತವಾಗಿ ಮುಂದುವರೆಯಲಿಲ್ಲ. ಈ ದಿಶೆಯಲ್ಲಿ ನಡೆದ ಇತರ ಪ್ರಯತ್ನಗಳ ಸಾಧ್ಯಾಸಾಧ್ಯತೆಗಳನ್ನು ಲೇಖನ ಅವಲೋಕಿಸುತ್ತದೆ. ಈಗಾಗಲೇ ಅಮೇರಿಕಾದ ಲೈಬ್ರರಿ ಆಫ಼್ ಕಾಂಗ್ರೆಸ್, ಬ್ರಿಟನ್ನ ಬ್ರಿಟಿಷ್ ಗ್ರಂಥಾಲಯಗಳು ಕಲೆಹಾಕಿ ದೊರಕಿಸುತ್ತಿರುವ ಕನ್ನಡ ಪುಸ್ತಕಗಳ ಬಗೆಗಿನ ಮಾಹಿತಿಯ ಪ್ರಮಾಣ ಹಾಗೂ ಅಚ್ಚುಕಟ್ಟುತನಗಳೆರಡೂ ಅನುಕರಣೀಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಒಂದೆರೆಡು ವೆಬ್ ತಾಣಗಳಾದ ಗ್ರಂಥಸಂಪದ ಹಾಗು INFLIBNET ಬಗ್ಗೆ ಚರ್ಚಿಸುತ್ತಾ ಎದುರಾಗುವ ಸಂಪರ್ಕ, ತಂತ್ರಾಂಶ ಇನ್ನಿತರ ಸಮಸ್ಯೆಗಳನ್ನು ಬಳಕೆದಾರರ ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ. ಸಮಗ್ರ ಗ್ರಂಥಸೂಚಿ ಹಾಗೂ ಗ್ರಂಥಸಂಗ್ರಹಣೆಗಳ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಸಮಗ್ರ ಗ್ರಂಥಸೂಚಿಯಿಂದಾಚೆಗೆ ಇ-ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು, ಬ್ರೈಲಿ ಪುಸ್ತಕಗಳ ಚರ್ಚೆಗೆ ಹೆಚ್ಚು ಒತ್ತು ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ಸಮಗ್ರ ಗ್ರಂಥಸೂಚಿಯನ್ನೇ ಕ್ರೋಢೀಕರಿಸಲಾಗದೆ ಪುಸ್ತಕಗಳ ಪೂರ್ಣ ಪಠ್ಯವನ್ನು ದೊರಕಿಸುವ ಸಾಧ್ಯತೆ ಕಾಣುತ್ತಿಲ್ಲ. ಸಮಗ್ರ ಗ್ರಂಥಸೂಚಿ ಈ ಎಲ್ಲಾ ಯೋಜನೆಗಳ ಮೂಲಾಧಾರವಾದ್ದರಿಂದ ಹಾಗೂ ಪುಸ್ತಕಗಳನ್ನು ಕೇವಲ ಸ್ಕ್ಯಾನ್ ಮಾಡಿ ವಿದ್ಯುನ್ಮಾನ ಮಾಧ್ಯಮಕ್ಕೆ ಅಳವಡಿಸುವುದು ಜೀವಂತ ಇ-ಪುಸ್ತಕಗಳಷ್ಟು ಪರಿಣಾಮಕಾರಿಯಲ್ಲ, ಹಾಗೂ ಇಂತಹ ಕಳಪೆ ಪುಸ್ತಕಗಳ ಗಣಕೀಕರಣ ನಿರರ್ಥಕ ಪ್ರಯತ್ನಗಳೆನಿಸುತ್ತವೆ.

Item type: Book chapter
Keywords: ಕನ್ನಡ ಪುಸ್ತಕಗಳು, ಗ್ರಂಥ ಹತೋಟಿ, ಸಮಗ್ರ ಗ್ರಂಥಸೂಚಿ, ಕನ್ನಡ ಪರಾಮರ್ಶನ ಗ್ರಂಥಾಲಯ, ಗ್ರಂಥ ಸಂಗ್ರಹ ; Kannada books, bibliographical control, comprehensive catalogue, Kannada reference library
Subjects: I. Information treatment for information services > IA. Cataloging, bibliographic control.
Depositing user: Dr. M S Sridhar
Date deposited: 31 Mar 2008
Last modified: 02 Oct 2014 12:11
URI: http://hdl.handle.net/10760/11316

References

ಅರುಣ್ ಜೋಳದ ಕೂಡ್ಲಿಗಿ."ಕನ್ನಡ ವಿಶ್ವವಿದ್ಯಾಲಯದ ಮಹತ್ವದ ಯೋಜನೆ: ‘ಸಂಶೋಧನಾ ಕರ್ನಟಕ’", ಪ್ರಜಾವಾಣಿ ಸೆಪ್ಟೆಂಬರ್ ೨೫, ೨೦೦೭, ಶಿಕ್ಷಣ ವಿಭಾಗ, ಪು. III.

ಕರೀಗೌಡ ಬೀಚನಹಳ್ಳಿ. "ಪಿಎಚ್. ಡಿ. ಗುಣಮಟ್ಟ ತಗ್ಗಿಸಿದವರಾರು?”, ಪ್ರಜಾವಾಣಿ , ನವೆಂಬರ್ ೮, ೨೦೦೬, ಸಾಪ್ತಾಹಿಕ ಪುರವಣಿ, ಪು. ೩.

ಜವರೇಗೌಡ, ದೇ. "ಮೊದಲ ಮಾತು", ಕನ್ನಡ ಗ್ರ೦ಥಸ್ರಚಿ, ಸ೦ಪುಟ ೧. ಮೈಸೂರು: ಮೈಸೂರು ವಿಶ್ವವಿದ್ಯಾಲಯ, ೧೯೭೧.

ನರಹಳ್ಳಿ ಬಾಲಸುಬ್ರಹ್ಮಣ್ಯ. "ಕನ್ನಡ ಅಧ್ಯಯನ ಮತ್ತು ಆಕರ ಸಾಹಿತ್ಯ", ಪ್ರಜಾವಾಣಿ, ಡಿಸೆಂಬರ್ ೪, ೨೦೦೫, ಸಾಪ್ತಾಹಿಕ ಪುರವಣಿ ಪು. ೩.

ನಾಗಪ್ಪ, ಬಿ. "ಕನ್ನಡ ಗ್ರ೦ಥಸೂಚಿಗಳು", ಗ್ರ೦ಥಾಲಯ ರಜತ ದೀಪ್ತಿ (ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಜತೋತ್ಸವ ನೆನಪಿನ ಸಂಪುಟ). ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ, ೧೯೯೮, ಪು. ೧೦೫-೧೧೭.

ಶ್ರೀಧರ್, ಎಂ. ಎಸ್. "ವಿಶ್ವ ಗ್ರಂಥಸೂಚಿಯಲ್ಲಿ ಕನ್ನಡ ಪುಸ್ತಕಗಳಿಲ್ಲ!", ವಿಜಯ ಕರ್ನಾಟಕ, ಮಾರ್ಚ್ ೭, ೨೦೦೩, ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷ, ಪು. ೨.

ಶ್ರೀಧರ್, ಎಂ. ಎಸ್. "ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳ ಮಾಹಿತಿ", ಕನ್ನಡ ಪ್ರಭ, ಜನವರಿ ೭, ೨೦೦೫, ಪು. ೬.

ಶ್ರೀಧರ್, ಎಂ. ಎಸ್. "ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳೆಷ್ಟು?", ಕನ್ನಡ ಪ್ರಭ, ಜನವರಿ ೨೮, ೨೦೦೫, ಪು. ೬.

ಶ್ರೀಧರ್, ಎಂ. ಎಸ್. "ಕನ್ನಡ ಕೃತಿಗಳು ಡಿಜಿಟೈಸ್ ಆಗಲಿವೆ !", ಪ್ರಜಾವಾಣಿ, ನವೆಂಬರ್ ೬, ೨೦೦೫, ಪು. ೬.


Downloads

Downloads per month over past year

Actions (login required)

View Item View Item